ಮಾಗಡಿ ಮತ್ತು ಹುಲಿಕಲ್ ನಡುವೆ ಪ್ರಕೃತಿ ದತ್ತವಾಗಿರುವ ಏಕಶಿಲಾ ಬೆಟ್ಟ ಕುದೂರಿನ ಭೈರವದುರ್ಗ. ಕೆಂಪೆಗೌಡರ ಮನೆದೆವರ ಹೆಸರಿನ ದುರ್ಗವಾಗಿರುವ ಇದು ಕೆಂಪೆಗೌಡರ ಪ್ರಮುಖ ಸೇನಾನೆಲೆಯಾಗಿತ್ತು .
ಸಮುದ್ರಮಟ್ಟದಿಂದ್ದ ಸು|| 3000 ಮೀಟರ್ ಎತ್ತರದಲ್ಲಿದೆ. ಈ ಬೆಟ್ಟ ಮೆಲ್ಬಾಗದಲ್ಲಿ ಕ್ರಿ.ಶ 17 ನೇ ಶತಮಾನದ ಮುಂಚುಣಿಯಲ್ಲಿ ಮಾಗಡಿ ಕೇಂಪೆಗೌಡರವರು ಕೋಟೆಗಳನ್ನು ನಿರ್ಮಿಸಲಾಗಿದೆ.ಬ್ರಿಟೀಷ್ ಅಧಿಕಾರಿಯಾದ ಮಾರ್ಥಸ್ ಎಂಬಾತಾನು ಕ್ರಿ.ಶ1750 ರಲ್ಲಿ ಈ ಕೋಟೆಗೆ ರಕ್ಷಣಾಗೋಡೆನ್ನು ನಿರ್ಮಿಸಿದನು.
ಬೆಂಗಳೂರಿನ ಸುತ್ತಲಿರುವ ನವದುರ್ಗಗಳಲ್ಲಿ ಒಂದಾಗಿದೆ.ಬೆಂಗಳೂರಿನಿಂದ್ದ ಸು|| 60 Km ದೂರದಲ್ಲಿದೆ.
ಈ ಬೆಟ್ಟದ ಮಧ್ಯಭಾಗದಲ್ಲಿ ಭೈರವೇಶ್ವರ ಸ್ವಾಮಿಯ ದೇವಾಲಯವು ಗುಹೆಯ ಮಾದರಿಯಲ್ಲಿದೆ. ಶೈವಗುರು ಗಗನದಾರ್ಯರು ಭೈರವನದುರ್ಗದಲ್ಲಿ ಶಿವೈಕ್ಯರಾದರೆಂದು ತಿಳಿಯುತ್ತದೆ
ಕೃಪೆ :- kempegowda.in
*ಈ ಬೆಟ್ಟಕ್ಕೆ ಭೈರವದುರ್ಗ ಎಂದು ಹೆಸರು ಬರಲು ಕಾರಣಾವೇನೆಂದರೆ?
-ಶಿವನ ಶಿರಭಾಗದಲ್ಲಿ ಗಂಗಾಮಾತೆಯನ್ನು ಪಡೆಯದಂತೆ. ಈ ಬೆಟ್ಟದ ಶಿರಭಾಗ / ಮೇಲ್ಬಾಗದಲ್ಲಿ ನೀರಿನ ದೂಣೆಯನ್ನು ಕಾಣಾಬಹುದಾಗಿರುವುದರಿಂದ್ದ ಈ ಹೆಸರು ಪಡೆದಿರಬಹುದೆಂದು ಇತಿಹಾಸಕಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
* ಕೋಟೆಯ ಕುರುಹುಗಳು ಅವನತಿಯ ಅಂಚಿನಲ್ಲಿದೆ ಕರ್ನಾಟಕ ಸರ್ಕಾರ ಹಾಗೂ ಪ್ರವಾಸೋಧ್ಯಮ ಇಲಾಖೆ (KSTDC) ಮತ್ತು ಇತಿಹಾಸ ಪ್ರಾಚ್ಯ ಇಲಾಖೆಯು ಕೂಂಚ ಗಮನ ಹರಿಸುವ ಮೂಲಕ ಅಭಿವದ್ಧಿಪಡಿಸುವ ಮೂಲಕ ಸಂರಕ್ಷಣೆಗೆ ಸಹಕರಿಸಬೆಕೆಂದು ವಿನಂತಿಸಿಕೂಳ್ಳುತ್ತೆವೆ.
ಭೈರವದುರ್ಗವನ್ನು NH 48 ಮತ್ತು SH 94. ಹಾಗು ಸೋಲೂರಿನ ರಸ್ತೆಯಿಂದ್ದ ತಲುಪಬಹುದು.
ಶಿವಗಂಗೆಯಿಂದ್ದ ಕೇವಲ 8 Km ಸಮೀಪದಲ್ಲಿದೆ.
*ವಿಳಾಸ:-
ಭೈರವದುರ್ಗ
ಪರ್ವತಪುರ,
ಕುದೂರು ,
ಮಾಗಡಿ ತಾಲ್ಲುಕು,
ರಾಮಾನಗರ ಜಿಲ್ಲೆ .
PIN-561101
No comments:
Post a Comment