Thursday, 28 July 2016

ಚಾರಣ ಗೀತೆ.

ಚಾರಣ ಚಾರಣ
ಹೆಜ್ಜೆ-ಹೆಜ್ಜೆಗೂ
ಮನ ತಲ್ಲಣ !2!

ಇತಿಹಾಸ ಪರಂಪರೆಯುಳ್ಳ
ಗುಡ್ಡ-ಬೆಟ್ಟಗಳ ಆಮಂತ್ರಣ
ಕೈ ಮುಗಿದು ಸ್ವಾಗತಿಸಿರುವ
ಪ್ರಕೃತಿ ಸೌಂದರ್ಯದ ತೋರಣ

ಕನ್ನಡಿಗರಿಂದ ಕನ್ನಡಿಗರಿಗಾಗಿ
ಕೂಡಿಕೊಂಡಿರುವ ವಾತಾವರಣ
ಹೆಮ್ಮೆಯ ಕವಿ-ಕಲಾವಿದರ
ಸ್ವರ-ಸಾಹಿತ್ಯದ ಸಂವಹನ
ಅರಿತು-ಮರೆತ ನಾಡು-ನುಡಿಯ
ವಿಚಾರ-ಸಂಕಿರಣ ಮಿಲನ

ಚಾರಣ ಚಾರಣ ಹೆಜ್ಜೆ-ಹೆಜ್ಜೆಗೂ ಮನ ತಲ್ಲಣ !2!

ಕೊರೆಯುವ ಚಳಿ ಇರಲಿ
ಚುಮು-ಚುಮು ಮಳೆ ಬರುತಿರಲಿ
ಮಂಜಿನ ಮುಸುಕು ಹಾಕಿದ
ಇಬ್ಬನಿಯ ಮಂಜು ನಮಗಿರಲಿ
ಎಂದೂ, ಕ್ಷಣ......... ಕ್ಷಣ......
ಈ ಚಾರಣ ........
ಋತುವಿನ ರೋಮಾಂಚನ.

ಚಾರಣ ಚಾರಣ ಹೆಜ್ಜೆ-ಹೆಜ್ಜೆಗೂ ಮನ ತಲ್ಲಣ !2!

ಬಾನು ಬಾಗುತಿರಲು
ಪಯಣ ನೂತನ
ಮಳೆರಾಯ ಗುಡುಗುತಿರಲು
ಪಯಣ ಆರೋಹಣ.
ಇಬ್ಬನಿಯ ಹೊದಿಕೆ ತೆರಿಯುತಿರಲು,
ನಿಸರ್ಗಭರಿತ ಪಟಗಳ ಮುದ್ರಣ.
ಉದಯಕಿರಣ ನೆತ್ತಿ ಸುಡಲು,
ನಮ್ಮ ಜೀವನ ಎಂಬ ಕಾದಂಬರಿಯೊಳಗೆ
ಸಾವಿರ ಪುಟಗಳ ಚಾರಣ ವಿನೂತನ ಬಂಧನ

ಚಾರಣ ಚಾರಣ ಹೆಜ್ಜೆ-ಹೆಜ್ಜೆಗೂ.... ಮನ ತಲ್ಲಣ.

No comments:

Post a Comment